Sunil Chhetri
ಆಟ ನಿಲ್ಲಿಸಿದ ಛೆಟ್ರಿ
ಅಂದು 2018 ರ ಇಂಟರ್ ಕಾಂಟಿನೆಂಟಲ್ ಪುಟ್ಬಾಲ್ ಕಪ್ ಫೈನಲ್. ಭಾರತವು ಬಲಾಡ್ಯ ಕೀನ್ಯಾ ವಿರುದ್ಧ ಅಂತಿಮ ಸೆಣಸಾಟ ನಡೆಸಬೇಕಿತ್ತು. ನೋಡಿದರೆ, ಸೆಮಿಫೈನಲ್ ವರೆಗೂ ಸ್ಟೇಡಿಯಮ್ಮಿನಲ್ಲಿ ಭಾರತವನ್ನು ಹುರಿದುಂಬಿಸಲು ಪ್ರೇಕ್ಷಕರದ್ದೇ ಬರ ಹೇಗೂ ಭಾರತ ಸೋಲುತ್ತೆ ಎಂದು ಟ್ರೋಲ್ ಮಾಡಿದವರೇ ಹೆಚ್ಚು ಫೈನಲ್ ನಲ್ಲೂ ಪ್ರೇಕ್ಷಕರ ಚಪ್ಪಾಳೆ, ಕೂಗು ಇಲ್ಲ ಎಂಬ ಗುಲ್ಲು ಹಬ್ಬಿತ್ತು. ಫೈನಲ್ ನ ಹಿಂದಿನ ದಿನ, ಭಾರತ ತಂಡದ ನಾಯಕ ಸುನೀಲ್ ಛೆಟ್ರಿ ಅಭಿಮಾನಿಗಳಿಗೆ ಕೈ ಮುಗಿದು ಒಂದು ವಿಡಿಯೋ ಪೋಸ್ಟ್ ಮಾಡಿದರು. “ನೀವು ನಿಂದಿಸಿದ್ದು ಸಾಕು . ನಮ್ಮ ಆಟ ನೋಡಿ, ನಾವು ಈ ಕಪ್ ಗೆದ್ದೇ ಗೆಲ್ತೀವಿ”. ಎಂಬ ಭಾವುಕ ದನಿಯಲ್ಲಿ ಹೇಳಿದ್ದರು. ಸಚಿನ್ ತೆಂಡೊಲ್ಕರ್, ವಿರಾಟ್ ಕೊಹ್ಲಿ ಅಂದು ಛೇಟ್ರಿ ಬೆನ್ನಿಗೆ ನಿಂತರು.
ಫೈನಲ್ ದಿನ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲೇ ಬಂದರು. ಛೆಟ್ರಿ ಕೊಟ್ಟ ಮಾತಿನಂತೆ ಅಂದು ಭಾರತ 2-0 ಗೋಲುಗಳಿಂದ ಕೀನ್ಯಾವನ್ನು ಬಗ್ಗುಬಡಿಯಿತು. ಛೇಟ್ರಿ ಭಾರತದ ಬಾವುಟವನ್ನು ತಿರುಗಿಸುತ್ತಾ, ಇಡೀ ಮೈದಾನ ಸುತ್ತಿ, ಪ್ರೇಕ್ಷಕರಿಗೆ ನಮಸ್ಕರಿಸಿದ್ದರು. ಪಂದ್ಯದ ಬಳಿಕ ಪತ್ರಕರ್ತರೊಬ್ಬರ ಪ್ರಶ್ನೆ. ಏಕೆ ಇಷ್ಟು ಭಾವುಕರಾಗಿ ವಿಡಿಯೊ ಮಾಡಿದಿರಿ ?
ಛೆಟ್ರಿ ಉತ್ತರ: ವಯಸ್ಸು 30 ದಾಟಿದೆ. ನನಗೆ ಮದುವೆಯಾಗಿದೆ. ನನಗೆ ವಯಸ್ಸಾಗುತ್ತಿದೆ.ಅದಕ್ಕಾಗಿಯೇ ನಾನು ಭಾವನೆಗಳಿಗೆ ಒಳಗಾಗುತ್ತೇನೆ.
ಈ ಛೆಟ್ರಿ ಬರೀ ಚೆಂಡನ್ನು ಕಾಲಿನಿಂದ ಒದೆಯುವ ಆಟಗಾರನಲ್ಲ. ಅಪ್ಪಟ ಭಾವುಕ ಜೀವಿ. ದೇಶದ ಬಗ್ಗೆ, ತಂಡದ ಬಗ್ಗೆ, ಕುಟುಮಬದ ಬಗ್ಗೆ ಯಾರಾದರೂ ಪ್ರಶ್ನೆ ಕೇಳಿದರೆ ಮಾತಿನಲ್ಲೇ ನೀರಾಗುವಂಥ ವ್ಯಕ್ತಿತ್ವ. ಭಾರತೀಯ ಪುಟ್ಬಾಲ್ ತಂಡದ ಪರ ಅತ್ಯಧಿಕ ಗೋಲ್ ಗಳಿಸಿದ ಹಾಗೂ ಒಂದು ದಶಕದಿಂದ ರಾಷ್ಟ್ರೀಯ ತಂಡದ ನಾಯಕರಾಗಿದ್ದ ಛೆಟ್ರಿ ಭಾರತದ ಅತ್ಯಂತ ಸಂಭವಿತ ಪುಟ್ಬಾಲ್ ಆಟಗಾರ ಕೂಡ. ಭಾತರದ ಪುಟ್ಬಾಲ್ ಜಗತ್ತು ರೊನಾಲ್ಡೊನನ್ನು ಹೆರಲಿಲ್ಲ. ಮೆಸ್ಸಿಯನ್ನೂ ನೋಡಲಿಲ್ಲ. ಆದರೆ, ಅವರ ಸಾಲಿನಲ್ಲಿ ನಿಲ್ಲುವ ಛಲಗಾರ ಛೆಟ್ರಿಯನ್ನು ಈ ದೇಶಕ್ಕೆ ಸಮರ್ಪಿಸಿದೆ.
1984 ರ ಆಗಸ್ಟ್ 3 ಆಂದ್ರಪ್ರದೇಶದ ಸಿಕಂದರಾಬಾದ್ ನಲ್ಲಿ ಜನಿಸಿದ ಛೆಟ್ರಿಗೆ ಪುಟ್ಬಾಲ್ ಸ್ವಾಭಾವಿಕವಾಗಿ ಒಲಿದಿತ್ತು. ಅವರ ತಂದೆ ಕೆ.ಬಿ. ಛೆಟ್ರಿ ಪುಟ್ಬಾಲ್ ಆಟಗಾರರಾಗಿದ್ದರೆ, ತಾಯಿ ಸುಶಿಲಾ ನೇಪಾಳ ರಾಷ್ಟ್ರೀಯ ಪುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ತಂದೆ ಸೈನ್ಯದಲ್ಲಿದ್ದ ಕಾರಣ ಛೆಟ್ರಿ ದೇಶಾದ್ಯಂತ ಪ್ರಯಾಣಿಸುತ್ತಿದ್ದರು. ಆಗಾಗ್ಗೆ ಶಾಲೆಗಳು ಬದಲಾದವು. ಆದರೆ ಛೆಟ್ರಿ ಮನದೊಳಗೆ ಬದಲಾಗದ ವಿಷಯವೆಂದರೆ ಅದು ಪುಟ್ಬಾಲ್ ಮೇಲಿನ ಒಲವು. ಅಡ್ಮಿಷನ್ ಆದ ಪ್ರತಿ ಶಾಲೆಯಲ್ಲೂ ಪುಟ್ಬಾಲ್ ನಲ್ಲಿ ಉತ್ತಮ ಸಾಧನೆ ಮಾಡಿದರು. ಆಸಕ್ತಿಯದಾಯಕ ಎಂದರೆ, ವೃತ್ತಿಪರ ಪುಟ್ಬಾಲ್ ಆಟಗಾರನಾಗುವ ಬಗ್ಗೆ ಅವರೆಂದೂ ಯೋಚಿಸಿಯೇ ಇರಲಿಲ್ಲ.
16 ವರ್ಷದ ಸುನಿಲ್ ಛೆಟ್ರಿ 2001 ರಲ್ಲಿ ಕೌಲಾಲಂಪುರದಲ್ಲಿ ನಡೆದ ಏಷ್ಯನ್ ಸ್ಕೂಲ್ ಚಾಂಪಿಯನ್ ಷಿಪ್ನಲ್ಲಿ ಆಡಲು ಭಾರತ ತಂಡದಿಮದ ಕರೆ ಬಂದಾಗ ಹೊಸದಿಲ್ಲಿಯ ಕಾಲೇಜೊಂದರಲ್ಲಿ ಸೆಕೆಂಡ್ ಪಿಯುಸಿಗೆ ಆಗಷ್ಟೇ ಸೇರಿದ್ದರು. ಅದೃಷ್ಟವಶಾತ್, ಭಾರತದ ಅತ್ಯಂತ ಹಳೆಯ ಮತ್ತು ಪ್ರಸಿದ್ದ ಪುಟ್ಬಾಲ್ ಕ್ಲಬ್ ಗಳಲ್ಲಿ ಒಂದಾದ ಮೋಹನ್ ಬಗಾನ್, ಛಟ್ರಿ ಅವರ ಪ್ರತಿಭೆ ಗುರುತಿಸಿ ಮುಂಬರುವ ದೇಶಿಯ ಋತುವಿಗೆ ಅವರೊಂದಿಗೆ ಒಡಬಂಡಿಕೆ ಮಾಡಿಕೊಂಡಿತು. ಅದೇ ಇವರ ಟರ್ನಿಂಗ್ ಪಾಯಿಂಟ್. ಅಲ್ಲಿಂದ ಛೆಟ್ರಿ ಹಿಂತಿರುಗಿ ನೋಡಲೇ ಇಲ್ಲ. ಮುಂದಿನ 8 ವರ್ಷಗಳಲ್ಲಿ ಭಾರತೀಯ ಪುಟ್ಬಾಲ್ ನಲ್ಲಿ ವಿಶೇಷ ಛಾಪು ಮೂಡಿಸಿರುವ ಮೋಹನ್ ಬಗಾನ್, ಜೆಸಿಟಿ, ಈಸ್ಟ್ ಬೆಂಗಲ್ ಮತ್ತು ಡೆಂಪೊ ತಂಡಗಳು ಕಲ್ಪಿಸಿದ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಮಡರು. ಆಟದಲ್ಲಿ ಪಕ್ವತೆ ಮೈಗೋಡಿಸಿಕೊಮಡು ವಿದೇಶಿ ಕ್ಲಬ್ ಗಳನ್ನು ಆಕರ್ಷಿಸಿದರು. ಲಂಡನ್ ಮೂಲದ ಕ್ಲಬ್ ಕ್ವೀನ್ಸ್ ಪಾರ್ಕ್ ರೇಂಜರ್ಸ್, ಅಮೇರಿಕದ ದೊಡ್ಡ ಲೀಗ್ ಪುಟ್ಬಾಲ್ನ ಕಾನ್ಸಾಸ್ ಸಿಟಿ ವಿಝೂರ್ಡ್ಸ ಜತೆಯೂ ಆಡಿದರು.
ಪಾಕ್ ವಿರುದ್ದ ಮೊದಲ ಗೋಲ್
ಅಂದು 2005, ಮೊದಲ ಬಾರಿಗೆ ಭಾರತೀಯ ಹಿರಿಯ ಪುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದರು ಛೆಟ್ರಿ. ಕೊಲ್ಕೊತಾದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪದಾರ್ಪಣೆ ಪಂದ್ಯ. ಮೊದಲ ಪಂದ್ಯದಲ್ಲೇ ಗೋಲು 2007 ರ ನೆಹರೂ ಕಪ್, ಛೆಟ್ರಿ ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿ. ಆ ಟೂರ್ನಿಯಲ್ಲೂ ಅವರು ಗಳಿಸಿದ್ದು 4 ಗೋಲುಗಳು. 1997 ರ ನಂತರ ಮೊದಲ ಬಾರಿಗೆ ಟ್ರೋಫಿ ಜಯಿಸಲು ಭಾರತಕ್ಕೆ ಅದು ನೆರವಾಯಿತು. 2008 ರ ಎಎಫ್ ಸಿ ಚಾಲೆಂಜ್ ಕಪ್ ನ ಫೈನಲ್ ನಲ್ಲಿ ಹ್ಯಾಟ್ರಿಕ್ ಸೇರಿ 4 ಗೋಲ್ ಗಳನ್ನು ಗಳಿಸುವ ಮೂಲಕ ಛೆಟ್ರಿ ಮಿಂಚಿನ ಸಂಚಲನ ಮೂಡಿಸಿದ್ದರು. ಇದು ಅವರನ್ನು ಭಾರತೀಯ ಪುಟ್ಬಾಲ್ ನ ಪೋಸ್ಟರ್ ಬಾಯ್ ಎಂದು ಗುರುತಿಸಲೂ ಕಾರಣವಾಯಿತು.
ಹೆಗಲಿಗೇರಿತು ಕ್ಯಾಪ್ಟನ್ ಹೊಣೆ
2011 ರ ಎ ಎಫ್ ಸಿ ಏಷ್ಯನ್ ಕಪ್ ನಲ್ಲಿ ದೇಶವನ್ನು ಪ್ರತಿನಿಧಿಸಿದ ಸುನಿಲ್, 2012 ರ ಎ ಎಫ್ ಸಿ ಚಾಲೆಂಜ್ ಕಪ್ ಅರ್ಹತಾ ಪಂದ್ಯಗಳಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕರಾದರು . 2012 ರಲ್ಲಿ ಮೊತ್ತೊಂದು ನೆಹರು ಕಪ್ ಗೆ ಭಾತರ ತಂಡವನ್ನು ಮುನ್ನಡೆಸಿದರು.
ಬೆಂಗಳೂರು 2 ನೇ ತವರು
ಬಿ ಎಫ್ ಸಿ ಗೆ ಎರವಲು ಆಟಗಾರನಾಗಿ ಬಂದ ಛೆಟ್ರಿ, ಕ್ರಮೇಣ ಬೆಂಗಳೂರು ರಿನ ಮಗನಾಗಿ ಪರಿವರ್ತನೆಗೊಂಡರು. ಛೆಟ್ರಿ ಮೇಲಿನ ಅಭಿಮಾನದಿಂದಲೇ ಪ್ರೇಕ್ಷರರು ಮೈದಾನಕ್ಕೆ ಆಗಮಿಸುತ್ತಿದ್ದರು. 2017-18 ರಲ್ಲಿ ಬೆಂಗಳೂರು ಎಫ್ ಸಿ ಐಎಎಸ್ ಎಲ್ ಗೆ ಪ್ರವೇಶಿಸಿದಾಗ ಛೆಟ್ರಿ ತಮ್ಮ ಆಟದಿಂದ ಸಂಚಲನ ಮೂಡಿಸಿದರಲ್ಲದೆ, ಚೊಚ್ಚಲ ಋತುವಿನಲ್ಲೇ ತಂಡವು ಫೈನಲ್ ಪ್ರವೇಶಿಸಲು ಕಾರಣರಾದರು. ಆದರೆ ಫೈನಲ್ ನಲ್ಲಿ ಬಿಎಫ್ ಸಿ ಸೋತಿತು. ಆದಾಗ್ಯೂ ಛೆಟ್ರಿ ಮುಂದಿನ ಋತುವಿನಲ್ಲಿ ಬೆಂಗಳೂರು ಎಫ್ ಸಿ ತಂಡವನ್ನು ಸತತ 2 ನೇ ಬಾರಿಗೆ ಐ ಎಸ್ ಎಲ್ ಫೈನಲ್ ಗೆ ಮುನ್ನಡೆಸಿದರು, ಅಲ್ಲಿ ಅವರು ಎಫ್ ಸಿ ಗೋವಾ ವಿರುದ್ದ ಪ್ರಶಸ್ತಿ ಗೆದ್ದು, ಇತಿಹಾಸ ನಿರ್ಮಿಸಿದರು.
ಕೀನ್ಯಾ ವಿರುದ್ಧ ಶತಕಗಳಿಸಿದ ಛೆಟ್ರಿ
2018 ರ ಇಂಟರ್ ಕಾಂಟಿನಲ್ ಕಪ್ ನಲ್ಲಿ ಸುನಿಲ್ ಛೆಟ್ರಿ ಕೀನ್ಯಾ ವಿರುದ್ಧ ಕಣಕ್ಕಿಳಿಯುವ ಮೂಲಕ 100 ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಿದರು. 2 ಗೋಲ್ ಗಳಿಸಿದ ಅವರು ತಂಡ ಟ್ರೋಫಿ ಜಯಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಈ ಪಂದ್ಯಾವಳಿಯಲ್ಲಿ ಅವರು ಲಯೋನೆಲ್ ಮೆಸ್ಸಿ ಅವರ 64 ಅಂತಾರಾಷ್ಟ್ರೀಯ ಗೋಲುಗಳ ದಾಖಲೆ ಸರಿಗಟ್ಟಿದರು.
ಕುಂಟುತ್ತಾ, ಆಗಾಗ್ಗೆ ಪುಟಿದೇಳುತ್ತಾ ಸಾಗುತ್ತಿರುವ ಭಾರತೀಯ ಪುಟ್ಬಾಲ್ ಗೆ ಈ ಎರಡು ದಶಕಗಳಲ್ಲಿ ಆಸರೆಯಾಗಿದ್ದವರು ನಾಯಕ ಸುನಿಲ್ ಛೆಟ್ರಿ , ಮೆಸ್ಸಿ ರೊನಾಲ್ಡೊರಂಥ ಜಾಗತಿಕ ದ್ಯೆತ್ಯರ ಸಾಲಿನಲ್ಲಿ ನಿಂತವರು ಛೆಟ್ರಿ. ಜಾಗತಿಕ ಪಂದ್ಯಗಳಲ್ಲೂ ಛೆಟ್ರಿಯ ಕಾಲ್ಚಳಕ್ಕೆ ಮಾರು ಹೋಗದವರೇ ಕಡಿಮೆ. ಫಿಫಾ ವಿಶ್ವಕಪ್ ನಲ್ಲಿ ಭಾರತಕ್ಕಿದ್ದ ಏಕೈಕ ಆಶಾಕಿರಣ ಛೆಟ್ರಿ ತಮ್ಮ 19 ವರ್ಷಗಳ ಕಾಲದ ಕಾಲ್ಚೆಂಡಿನ ಪಯಣಕ್ಕೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ಆಘಾತಕಾರಿ ಸಂಗತಿ.
For more information: Sunil Chhetri - Wikipedia
No comments:
Post a Comment